ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯ

ಶಿಕಾರಿಪುರ

ಶಿಕ್ಷಣದ ಯೋಜನೆ

ಎರಡು ಶೈಕ್ಷಣಿಕ ವರ್ಷಗಳ(ನಾಲ್ಕು ಸೆಮಿಸ್ಟರ್), ಆದರೆ ಕೋರ್ಸ್ ಗೆ ನೊಂದಾವಣಿ ಹೊಂದಿದ ಮೂರು ವರ್ಷಗಳಲ್ಲಿ ಪೂರ್ಣಗೊಳಿಸಬೇಕಾದ ಶಿಕ್ಷಣ ಯೋಜನೆ ಇದಾಗಿದೆ.

 ಕಾರ್ಯನಿರ್ವಹಣಾ ದಿನಗಳು:

  • ಪ್ರತಿವರ್ಷ ಕಾರ್ಯ ನಿರ್ವಹಿಸುವ ಅವಧಿ ಕನಿಷ್ಠ 200 ದಿನಗಳ ಶೈಕ್ಷಣಿಕ ವರ್ಷವಾಗಿರುತ್ತದೆ. ಆದರೆ ಇದು ದಾಖಲಾತಿ ಪ್ರಕ್ರಿಯೆ ಮತ್ತು ಪರೀಕ್ಷಾ ದಿನಗಳನ್ನು ಹೊರತಾಗಿರುತ್ತದೆ.
  • ಸಂಸ್ಥೆಯು ವಾರದಲ್ಲಿ ಆರು ದಿನಗಳ ಕನಿಷ್ಠ 36 ಗಂಟೆಗಳು ಕಾರ್ಯ ನಿರ್ವಹಿಸುವುದು, ಈ ಅವಧಿಯಲ್ಲಿ ಪ್ರಶಿಕ್ಷಕರು ಮತ್ತು ಪ್ರಶಿಕ್ಷಣಾರ್ಥಿಗಳ ದೈಹಿಕ ಉಪಸ್ಥಿತಿಯೊಂದಿಗೆ, ಸಂವಹನ, ಮಾರ್ಗದರ್ಶನ, ಚರ್ಚೆ, ಸಲಹೆ-ಸಮಾಲೋಚನೆಗಳು ಜರುಗುತ್ತವೆ.
  • ಬಿ.ಇಡಿ., ಕೋರ್ಸ್‌ನ ಕಾರ್ಯ ನಿರ್ವಹಣೆಯ ದಿನಗಳು 80% ರಷ್ಟು ಪ್ರಶಿಕ್ಷಣಾರ್ಥಿಗಳ ಕನಿಷ್ಠ  ಹಾಜರಾತಿ ಮತ್ತು ಪೂರ್ವ ತರಬೇತಿಯಲ್ಲಿ (Internship) ಕನಿಷ್ಠ ಶೇ 90% ರಷ್ಟು ದಿನಗಳು ಶಾಲೆಯಲ್ಲಿ ಉಪಸ್ಥಿತರಿರಬೇಕು.