ದೂರದೃಷ್ಟಿ, ಧ್ಯೇಯ ಹಾಗೂ ಮೌಲ್ಯಗಳು
ದೂರದೃಷ್ಟಿ
ವಿದ್ಯಾರ್ಥಿಗಳ ಸಾಮರ್ಥ್ಯವನ್ನು ಹೊರ ಹಾಕುವುದರೊಂದಿಗೆ ಅತ್ಯುತ್ತಮವಾದುದನ್ನು ಕೈಗೊಳ್ಳಲು ಪ್ರೇರೇಪಿಸಿ, ಮಾನವೀಯ, ಜಾಗತಿಕ ಶಕ್ತರನ್ನಾಗಿಸಿ ದೇಶದ ಉಪಯುಕ್ತ ಪ್ರಜೆಯನ್ನಾಗಿಸುವುದು.
ಧ್ಯೇಯ
- ವಿದ್ಯಾರ್ಥಿಗಳ ಅಂತಃ ಸಾಮರ್ಥ್ಯವನ್ನು ನೈಜತೆಗೆ ಪರಿವರ್ತಿಸುವುದು.
- ವಿದ್ಯಾರ್ಥಿಗಳಲ್ಲಿ ಪರಿಪೂರ್ಣ ವ್ಯಕ್ತಿತ್ವ, ಉಪಯುಕ್ತ ಚಿಂತನೆಗಳನ್ನು ಬೆಳೆಸುವುದು.
- ವಿದ್ಯಾರ್ಥಿಗಳಲ್ಲಿ ಸ್ವಯಂ ಅಭಿವೃದ್ಧಿ, ಸಂತೋಷ, ಆತ್ಮಸಂತೃಪ್ತಿಯನ್ನು ರೂಢಿಸಿಕೊಳ್ಳುವಂತೆ ಮಾಡುವುದು.
ಮೌಲ್ಯಗಳು
- ಸೃಜನಾತ್ಮಕತೆ, ಸ್ವತಂತ್ರ ಚಿಂತನೆ ಮತ್ತು ಜೀವನ ಪರ್ಯಂತ ಕಲಿಕೆಗೆ ಪ್ರೋತ್ಸಾಹಿಸುವುದು.
- ಉತ್ಸಾಹ, ಶೃದ್ಧೆ ಮತ್ತು ಪ್ರಾಮಾಣಿಕತೆಯನ್ನು ಪೋಷಿಸುವುದು ಮತ್ತು ಬೆಳೆಸುವುದು.
- ಸಮಾಜದ ಬದಲಾವಣೆ ಮತ್ತು ಅಗತ್ಯಕ್ಕೆ ಅನುಸಾರವಾಗಿ ಶಿಕ್ಷಣದ ಅರಿವು ನೀಡುವುದು.
- ಪ್ರಾಮಾಣಿಕತೆ, ಜವಾಬ್ದಾರಿತನ ಮತ್ತು ಕಾರ್ಯಕ್ಷಮತೆಯನ್ನು ಬೆಳೆಸುವುದು.
- ಪ್ರತೀ ಪ್ರಶಿಕ್ಷಣಾರ್ಥಿಯ ಅಭಿವೃದ್ಧಿ ಮತ್ತು ಬೆಳವಣಿಗೆಗಾಗಿ ಸುಸಜ್ಜಿತ ಮೂಲ ಸೌಲಭ್ಯ, ಸಂಪನ್ಮೂಲಗಳು ಮತ್ತು ಸೇವೆಗಳನ್ನು ಒದಗಿಸುವುದು.