ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯ

ಶಿಕಾರಿಪುರ
ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯ > ನೀತಿ ಮತ್ತು ನಿಯಮಾವಳಿಗಳು

ನೀತಿ ಮತ್ತು ನಿಯಮಾವಳಿಗಳು

ಶಿಕ್ಷಕರ ತರಬೇತಿ ಕಾರ್ಯಕ್ರಮವು ಸಾಮಾನ್ಯವಾಗಿ ಬಿ.ಇಡಿ ಎಂಬ ವೃತ್ತಿ ಆಧಾರಿತ ಕೋರ್ಸ್ ಆಗಿರುತ್ತದೆ. ಇದು ಹಿರಿಯ ಪ್ರಾಥಮಿಕ (6ರಿಂದ 8ನೇ ತರಗತಿ), ಪ್ರೌಢಶಿಕ್ಷಣ (9 ರಿಂದ 10ನೇ ತರಗತಿ, ಉನ್ನತ ಪ್ರೌಢಶಿಕ್ಷಣ (11 ಮತ್ತು 12ನೇ ತರಗತಿ)ಗಳಿಗೆ ಬೇಕಾದ ಶಿಕ್ಷಕ ತರಬೇತಿಯನ್ನು ನೀಡಲಾಗುತ್ತದೆ. ಈ ಬಿ.ಇಡಿ ಕೋರ್ಸ್ ಎನ್.ಸಿ.ಟಿ.ಇ.ಯಿಂದ ಮಾನ್ಯತೆ ಹೊಂದಿದ ಬಿ.ಇಡಿ ಕಾಲೇಜುಗಳಿಂದ ನಡೆಸಲ್ಪಡುತ್ತದೆ.

ಕರ್ನಾಟಕದಲ್ಲಿ ರಾಜ್ಯ ವಿಶ್ವವಿದ್ಯಾನಿಲಯಗಳ ವಿಧಿ 2000 ದಲ್ಲಿನ 44ನೇ ವಿಭಾಗಕ್ಕೆ ಸಂಬಂಧಿಸಿದಂತೆ ಕುವೆಂಪು ವಿಶ್ವವಿದ್ಯಾನಿಲಯದ ಶೈಕ್ಷಣಿಕ ಮಂಡಳಿಯು ನಿರ್ಧರಿಸಿರುವ ನಿಯಮಗಳು ಈ ಕೆಳಗಿನಂತಿದೆ.

  1. ಈ ಕಾಯಿದೆಗಳು ಕುವೆಂಪು ವಿಶ್ವವಿದ್ಯಾನಿಲಯ 2014-2015 ರ ಕಾಯಿದೆಗಳೆಂದು ಕರೆಯಲ್ಪಟ್ಟಿದೆ. ಬಿ.ಇಡಿಯು ಎರಡು ವರ್ಷದ ಪದವಿಯಾಗಿದೆ (ಶಿಕ್ಷಣಾವಧಿ ಯೋಜನೆ)
  2. ಶಿಕ್ಷಣದ ಪದವಿಯು ಶಿಕ್ಷಣ ನಿಕಾಯದ ಸಿಬ್ಬಂಧಿಗಳಿಂದ ನೀಡಲ್ಪಡುತ್ತದೆ.

ಅರ್ಹತೆಗಳು:

  1. ಅಭ್ಯರ್ಥಿಯು ಕಡ್ಡಾಯವಾಗಿ ಭಾರತೀಯ ನಾಗರೀಕನಾಗಿರಬೇಕು. ಹಾಗೆಯೇ ಕರ್ನಾಟಕದವರಾಗಿದ್ದರೆ ಸರ್ಕಾರಿ ಕೋಟಾದ ಸೀಟನ್ನು ಪಡೆಯಬಹುದಾಗಿರುತ್ತದೆ. “ಕರ್ನಾಟಕದ ಅಭ್ಯರ್ಥಿ ” ಎಂದರೇ,
  • ವಿದ್ಯಾರ್ಥಿ ಸರ್ಕಾರಿ ಶಾಲೆಗಳು ಅಥವಾ ಕರ್ನಾಟಕ ಸರ್ಕಾರಿಂದ ಮಾನ್ಯತೆ ಪಡೆದ ಶೈಕ್ಷಣಿಕ ಸಂಸ್ಥೆಗಳಲ್ಲಿ ಕನಿಷ್ಟ 7 ವರ್ಷಗಳ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿರಬೇಕು. ಅಂದರೆ ದ್ವಿತೀಯ ಪಿ.ಯು.ಸಿ ವರೆಗಿನ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿರಬೇಕು.
  • ಕರ್ನಾಟಕದಲ್ಲಿ ನಡೆಯುವ ಎಸ್.ಎಸ್.ಎಲ್.ಸಿ./10ನೇ ಅಥವಾ ಪಿ.ಯು.ಸಿ/12ನೇ ತರಗತಿಯ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿರಬೇಕು.
  • ವಿದ್ಯಾರ್ಥಿಯು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಅಥವಾ ಮುಕ್ತ ಶಾಲೆಗಳಲ್ಲಿ ೭ ವರ್ಷಗಳ ಅಭ್ಯಾಸ ಮಾಡದಿದ್ದರೆ ವಿದ್ಯಾರ್ಥಿಯು ಸ್ಥಳೀಯ ತಾಲ್ಲೂಕಿನ ತಹಶೀಲ್ದಾರರಿಂದ ೭ ವರ್ಷಗಳ ನಿವಾಸಿ ಧೃಢೀಕರಣ ಪತ್ರವನ್ನು ನೀಡತಕ್ಕದ್ದು.
  1. ವಿದ್ಯಾರ್ಥಿಯು ಎಸ್.ಎಸ್.ಎಲ್.ಸಿ/ಪಿ.ಯು.ಸಿ ಉತ್ತೀರ್ಣರಾಗಿರಬೇಕು ಅಥವಾ ಮುಕ್ತ ಶಾಲೆಗಳಲ್ಲಿ ಖಾಸಗಿ ಅಭ್ಯರ್ಥಿಗಳಾಗಿ ವಿದ್ಯಾಭ್ಯಾಸ ಕೈಗೊಂಡಿದ್ದರೆ, ಸಂಬಂಧಿತ ಅಂಕಪಟ್ಟಿಯನ್ನು ಕರ್ನಾಟಕ ಪ್ರೌಢಶಿಕ್ಷಣ ಮಂಡಳಿಯಿಂದ ಅಥವಾ ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ಖಾಸಗಿ ವಿದ್ಯಾರ್ಥಿ ಎಂದು ಪ್ರಮಾಣ ಪತ್ರ ಸಲ್ಲಿಸುವುದು.
  2. ಕಲಿಕಾರ್ಥಿಯು 5೦% ಅಂಕಗಳೊಂದಿಗೆ ಪದವಿ ಶಿಕ್ಷಣವನ್ನು ಅಥವಾ ವಿಜ್ಞಾನ/ಸಮಾಜ ವಿಜ್ಞಾನ/ಮಾನವಿಕ ವಿಷಯಗಳಲ್ಲಿ ಸ್ನಾತಕೋತ್ತರ ಪದವಿಯನ್ನು ಹಾಗೆಯೇ ಇಂಜಿನಿಯರಿಂಗ್ ಪದವಿ/ವಿಜ್ಞಾನ/ಗಣಿತ ವಿಷಯವನ್ನು ಐಚ್ಛಿಕವಾಗಿ ಅಭ್ಯಾಸಿಸಿದ ತಾಂತ್ರಿಕ ಶಿಕ್ಷಣದಲ್ಲಿ 55% ಅಂಕ ಪಡೆದಿರತಕ್ಕದ್ದು ಅಥವಾ ಬಿ.ಇಡಿ. ಕೋರ್ಸ್‌ಗೆ ತತ್ಸಮಾನ ಅರ್ಹತೆಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರತಕ್ಕದ್ದು.
  3. ಕಲಿಕಾರ್ಥಿಯು ಪದವಿ ಶಿಕ್ಷಣದಲ್ಲಿ ಕನಿಷ್ಟ 50% ಅಂಕ, ಕ್ರೋಢಿಕೃತವಾಗಿ ಐಚ್ಚಿಕ ಮತ್ತು ಭಾಷಾ ವಿಷಯಗಳನ್ನು ಸೇರಿಸಿ ಹೊಂದಿರತಕ್ಕದ್ದು, ಇದರಲ್ಲಿ 10% ಆಂತರಿಕ ಅಂಕಗಳ ಸೇರ್ಪಡೆ ಅಥವಾ 2 ವರ್ಷಗಳ ಸ್ನಾತಕೋತ್ತರ ಪದವಿಯ 50% ಕ್ರೋಢಿಕೃತ ಅಂಕ ಹೊಂದಿರುವುದು ಅಥವಾ (ವಿಜ್ಞಾನ ಮತ್ತು ಗಣಿತ ವಿಷಯಗಳನ್ನು ಐಚ್ಛಿಕವಾಗಿ ಅಭ್ಯಾಸಿಸಿದ ತಾಂತ್ರಿಕ ಶಿಕ್ಷಣ / ಇಂಜಿನಿಯರಿಂಗ್ ಪದವಿಯಲ್ಲಿ 50% ಅಂಕ ಹೊಂದಿರುವುದು. ಆದರೆ ಎಸ್.ಸಿ ಎಸ್.ಟಿ, ಪ್ರವರ್ಗ-1 ಮತ್ತು ದೈಹಿಕ ಅಂಗವಿಕಲ ಕಲಿಕಾರ್ಥಿಗಳಿಗೆ ಕ್ರೋಢೀಕೃತವಾಗಿ 45% ಅಂಕಗಳ ಮೂರು ವರ್ಷದ ಪದವಿಯಲ್ಲಿ ಐಚ್ಛಿಕ ಮತ್ತು ಭಾಷಾ ವಿಷಯವನ್ನು ಸೇರಿಸಿ ಹೋಂದಿರುವುದು ಇದರಲ್ಲಿ 10% ಆಂತರಿಕ ಅಂಕಗಳು ಸೇರ್ಪಡೆಗೊಂಡಿರುತ್ತವೆ, ಅಥವಾ 2 ವರ್ಷಗಳ ಸ್ನಾತಕೋತ್ತರ ಪದವಿಯಲ್ಲಿ ಕ್ರೋಢೀಕೃತವಾಗಿ 50% ಅಂಕಗಳನ್ನು ಹೊಂದಿರುವುದು.
  4. ಅರ್ಹತೆಗಳ ನಿರ್ಧಾರಗಳು (ನಿರ್ಣಯಗಳು):

ಬಿ.ಇಡಿ ಪದವಿಗೆ ನೋಂದಾಯಿಸಲು ಅರ್ಹತೆಗಳು 3 ವರ್ಷಗಳ ಪದವಿಯ ಪರೀಕ್ಷೆಗಳ ಅಂಕ ಮತ್ತು ಭಾಷೆ ಮತ್ತು 10% ಆಂತರಿಕ ಅಂಕಗಳನ್ನು ಪರಿಗಣಿಸುವುದು. ಒಂದು ವೇಳೆ ಕಲಿಕಾರ್ಥಿಯು ಬಿ.ಇಡಿ ನೋಂದಾವಣಿಗೆ ಅಗತ್ಯ ಅರ್ಹತೆ ಹೊಂದಿರದಿದ್ದರೆ ಸ್ನಾತಕೋತ್ತರ ಪದವಿಯಲ್ಲಿ ಪಡೆದ ಅಂಕಗಳನ್ನು ಪರಿಗಣಿಸಲಾಗುವುದು. ಮುಂದುವರೆದು ಇಂಜಿನಿಯರಿಂಗ್ ಪದವಿ ಮತ್ತು ವಿಜ್ಞಾನ ಮತ್ತು ಗಣಿತ ವಿಷಯಗಳನ್ನು ಐಚ್ಛಿಕವಾಗಿ ಓದಿದ ತಾಂತ್ರಿಕ ಶಿಕ್ಷಣವನ್ನು ಅರ್ಹತೆಯಾಗಿ ಪರಿಗಣಿಸಲಾಗುವುದು.

  1. ಮೀಸಲಾತಿ ಸ್ಥಾನಗಳಿಗೆ ರಾಜ್ಯ ಸರ್ಕಾರದ ನೀತಿ ನಿಯಮಾವಳಿಗಳು ಅನ್ವಯಿಸುತ್ತವೆ.

(1) ಸೇವಾನಿರತ ಅಧ್ಯಯನದ ಕಲಿಕಾರ್ಥಿಯು ರಾಜ್ಯ ಸರ್ಕಾರ ಕಾಲ-ಕಾಲಕ್ಕೆ ಒದಗಿಸುವ ಅಗತ್ಯತೆಯ ನಿಗದಿತ ನಿಯಮಾವಳಿಗಳನ್ನು ಪೂರ್ಣಗೊಳಿಸುವುದರೊಂದಿಗೆ ಶಿಕ್ಷಣ ಪದವಿಗೆ ದಾಖಲಾತಿ ಹೊಂದುವುದು.

(2) ರಾಜ್ಯ ಸರ್ಕಾರದ ದಾಖಲಾತಿ ಕೇಂದ್ರವು ನಮೂದಿಸಿದ ಅರ್ಹತೆಯನ್ನು ಹೊಂದಿರುವುದು.

  1. ಕಲಿಕಾರ್ಥಿಯು ಅವರ ಪೋಷಕರಿಗೆ ಸಂಬಂಧಿಸಿದ ದಾಖಲೆಗಳು ಅಸಮರ್ಪಕವಾಗಿದ್ದರೆ ಅಥವಾ ಅಸಮರ್ಪಕ ಅಂಕಪಟ್ಟಿ ಅಥವಾ ಇತರೆ ಪ್ರಮಾಣ ಪತ್ರಗಳನ್ನು ನೀಡಿದಲ್ಲಿ ವಿಶ್ವವಿದ್ಯಾನಿಲಯವು ಕಲಿಕಾರ್ಥಿಯ ಸ್ಥಾನವನ್ನು ಅನೂರ್ಜಿತಗೊಳಿಸಬಹುದು. ಅಥವಾ ಕಾನೂನಾತ್ಮಕ ಕ್ರಮವನ್ನು ಕೈಗೊಳ್ಳಬಹುದು.

ಗುಣಾತ್ಮಕ ಮೌಲ್ಯಮಾಪನ ಸಮಿತಿ

ಪೂರ್ವ ತರಬೇತಿ ಮತ್ತು ಕಾರ್ಯಶೀಲತೆಯ ಆಂತರಿಕ ಅಂಕಗಳನ್ನು ಮೌಲ್ಯ ಮಾಡಲು ಪರಿಷ್ಕೃರಣೆಗೆ ಮತ್ತು ಮಾರ್ಗದರ್ಶನಕ್ಕಾಗಿ ಅಸ್ತಿತ್ವದಲ್ಲಿದೆ.

  1. ಮುಖ್ಯಸ್ಥರು/ ಅಧ್ಯಕ್ಷರು : ಶಿಕ್ಷಣ ನಿಕಾಯದ ಡೀನರು/ಶಿಕ್ಷಣ ಮಹಾವಿದ್ಯಾಲಯಗಳಲ್ಲಿನ ಹಿರಿಯ ಶ್ರೇಣಿ ಪ್ರಶಿಕ್ಷಕರು ಸರದಿ ಆಧಾರಿತವಾಗಿ ಅಧ್ಯಕ್ಷರುಗಳಾಗಿರುತ್ತಾರೆ
  2. ಗುಣಾತ್ಮಕ ಮೌಲ್ಯಾಂಕನ ಸಮಿತಿಯ ಸದಸ್ಯರುಗಳಾಗಿ ಮೂರು ಜನ ಶಿಕ್ಷಣ ಮಹಾವಿದ್ಯಾಲಯಗಳಲ್ಲಿನ ಹಿರಿಯ ಶ್ರೇಣಿ ಪ್ರಶಿಕ್ಷಕರು ಕನಿಷ್ಠ 10 ವರ್ಷಗಳ ಅನುಭವವನ್ನು ಹೊಂದಿರುವ ಜೇಷ್ಠತಾ ಪಟ್ಟಿಯನ್ನಾಧರಿಸಿ ಸರದಿಯಂತೆ ಕಾರ್ಯನಿರ್ವಹಿಸುತ್ತಾರೆ. ಇದರಲ್ಲಿ ಒಬ್ಬರು ವಿಜ್ಞಾನ, ಮತ್ತೋರ್ವರು ಕಲಾ ವಿಭಾಗದ ಪ್ರಶಿಕ್ಷಕರು ಸದಸ್ಯರುಗಳಾಗಿರುತ್ತಾರೆ.
  3. ಸಂದರ್ಶಿತ ಕಾಲೇಜಿನ ಪ್ರಾಚಾರ್ಯರರು ಆ ಕಾಲೇಜಿನ ಕಾರ್ಯನಿರ್ವಹಣೆಗೆ ಸಂಬಂಧಿಸಿದಂತೆ ಗುಣಾತ್ಮಕ ಮೌಲ್ಯಮಾಪನ ಸಮಿತಿಯ ಸಹ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಾರೆ.
  4. ಶಿಕ್ಷಣ ಮಹಾವಿದ್ಯಾಲಯಗಳ ಸಂಖ್ಯೆ 10ಕ್ಕಿಂತ ಹೆಚ್ಚಾದಲ್ಲಿ ಕುವೆಂಪು ವಿಶ್ವವಿದ್ಯಾನಿಲಯದ ನಿಯಮಗಳಂತೆ ಮತ್ತೊಂದು ಗುಣಾತ್ಮಕ ಮೌಲ್ಯಮಾಪನ ಸಮಿತಿಯನ್ನು ಮೇಲ್ಕಾಣಿಸಿದ ನಿಂಬಂಧನೆಗಳಿಗೆ ಒಳಪಟ್ಟು ರಚಿಸಲಾಗುತ್ತದೆ.
  5. ಎನ್.ಸಿ.ಟಿ.ಇಯಿಂದ ಕಾಲ-ಕಾಲಕ್ಕೆ ನಿಗದಿಯಾಗುವ ಪ್ರಾಮಾಣಿಕ ನಿಯಮಗಳಿಗೆ ಶಿಕ್ಷಕರ ಶಿಕ್ಷಣವು ಒಳಪಡತಕ್ಕದ್ದು.
  6. ಫಲಿತಾಂಶ, ರ್‍ಯಾಂಕ್ ಗಳು, ಉನ್ನತೀಕರಣ, ಚಾಲೇಂಜಿಂಗ್ ಮೌಲ್ಯಮಾಪನ ಇನ್ನಿತರೆ ತಗಾದೆಗಳನ್ನು ಘೋಷಿಸಲು ಕುವೆಂಪು ವಿಶ್ವವಿದ್ಯಾನಿಲಯದ ನೀತಿ-ನಿಯಮಗಳು ಅನ್ವಯಿಸುತ್ತವೆ.
  7. ಕಲಿಕಾರ್ಥಿಯ ಆಂತರಿಕ ಮೌಲ್ಯಾಂಕನ ಮತ್ತು ಸೈದ್ಧಾಂತಿಕ ಪರೀಕ್ಷೆಗಳಲ್ಲಿ 50% ಅಂಕಗಳೊಂದಿಗೆ ಉತ್ತೀರ್ಣರಾಗತಕ್ಕದ್ದು, ಕನಿಷ್ಠ 40% ಅಂಕಗಳನ್ನು ಪ್ರತಿ ವಿಷಯದಲ್ಲಿ ಹೊಂದುವುದು ಹಾಗೂ ಪ್ರಮಾಣೀಕೃತ 50% ಆಂಕಗಳನ್ನು ಎಲ್ಲಾ ವಿಷಯಗಳು ಒಟ್ಟುಗೂಡಿಸಿ ಹೊಂದುವುದು.
  8. ಆಂತರಿಕ ಮೌಲ್ಯಾಂಕನ ಮತ್ತು ಪೂರ್ವತರಬೇತಿಯ ಅಂಕ ಸುಧಾರಣೆಗಾಗಿ ಮತ್ತೊಮ್ಮೆ ಅವಕಾಶವಿರುವುದಿಲ್ಲ.
  9. ಅವನು/ಳು ಆಂತರಿಕ ಮೌಲ್ಯಾಂಕನಕ್ಕೆ ಒಳಗಾಗದಿದ್ದಲ್ಲಿ ಅದೇ ಸೆಮಿಸ್ಟರ್‌ಗೆ ಪುನಃ ದಾಖಲಾತಿ ಹೊಂದಿ ಪೂರ್ಣಗೊಳಿಸತಕ್ಕದ್ದು.
  10. ಮೇಲ್ಕಾಣಿಸಿದ ಎಲ್ಲಾ ನಿಬಂಧನೆಗಳಲ್ಲಿ ಯಾವುದೇ ಬದಲಾವಣೆಯಾಗಬೇಕಾದರೆ ಕುವೆಂಪು ವಿಶ್ವವಿದ್ಯಾನಿಲಯದ ಉಪ ಕುಲಪತಿಗಳು/ ಶೈಕ್ಷಣಿಕ ಮಂಡಳಿಯಿಂದ ನಿರ್ಧರಿಸಲ್ಪಟ್ಟಿರಬೇಕು.