ಶಿಕ್ಷಣ ಮಹಾವಿದ್ಯಾಲಯದ ಬಗ್ಗೆ
ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯವು 1996ರಲ್ಲಿ ಪ್ರಾರಂಭವಾಗಿ, 2011ರಲ್ಲಿ ಕರ್ನಾಟಕ ಸರ್ಕಾರದ ಅನುದಾನಕ್ಕೆ ಒಳಪಟ್ಟಿರುತ್ತದೆ. ಶಿಕ್ಷಣ ಮಹಾವಿದ್ಯಾಲಯವು ಕುವೆಂಪು ವಿಶ್ವವಿದ್ಯಾನಿಲಯದಿಂದ ಶಾಶ್ವತ ಸಂಯೋಜನೆಯೊಂದಿಗೆ ಎನ್.ಸಿ.ಟಿ.ಇ. ಹಾಗೂ ಯು.ಜಿ.ಸಿ ಅಧಿನಿಯಮ 2(ಎಫ್), ಸೆಕ್ಷನ್ 12(ಬಿ) ಮನ್ನಣೆ ಪಡೆದಿದೆ ಮತ್ತು ನ್ಯಾಕ್‌ನಿಂದ ’ಬಿ’ ಗ್ರೇಡ್ ಮಾನ್ಯತೆ ಹೊಂದಿದೆ. ಅನುಭವಿ ಅಧ್ಯಾಪಕ ವೃಂದ, ಸುಸಜ್ಜಿತ ಪ್ರಯೋಗಾಲಯ, ವಸತಿ ನಿಲಯಗಳು, ಪ್ರಯಾಣಕ್ಕೆ ಬಸ್ ಸೌಕರ್ಯಗಳೊಡನೆ ಸುಂದರವಾದ ವಾತಾವರಣದಲ್ಲಿ ಎನ್‌ಸಿಟಿಇ ನಿಯಮಗಳ ಪ್ರಕಾರ ಸುಸಜ್ಜಿತ ಕಟ್ಟಡವನ್ನು ಹೊಂದಿದೆ. ಇದು ಶಿಕಾರಿಪುರದ ಶಿವಮೊಗ್ಗ ರಸ್ತೆಯ ಪಕ್ಕದಲ್ಲಿರುವ 4.24 ಎಕರೆಜಾಗದಲ್ಲಿದೆ. ಕಾಲೇಜಿನ ಆವರಣವು ರಮಣೀಯ ಸೌಂದರ್ಯದೊಂದಿಗೆ ಶಾಂತ ಹಾಗೂ ಸುಂದರವಾದ ಪರಿಸರವನ್ನು ಹೊಂದಿದ್ದು ಶಿಕ್ಷಣಕ್ಕೆ ಅನುಕೂಲಕರವಾಗಿದೆ. ಮಹಾವಿದ್ಯಾಲಯವು ಉತ್ತಮ ಗುಣಮಟ್ಟದ ಶಿಕ್ಷಕರ ಶಿಕ್ಷಣವನ್ನು ಒದಗಿಸುವ ದಾಖಲೆಯನ್ನು ಹೊಂದಿದ್ದು, ಪ್ರತಿ ವರ್ಷ 100% ಫಲಿತಾಂಶದೊಂದಿಗೆ ಕುವೆಂಪು ವಿಶ್ವವಿದ್ಯಾಲಯದಿಂದ ರ್‍ಯಾಂಕ್‌ನ್ನು ಪಡೆಯುತ್ತಿದೆ.