ದೂರದೃಷ್ಠಿ, ಮಿಷನ್, ಮತ್ತು ಉದ್ದೇಶಗಳು
ದೂರದೃಷ್ಟಿ :
- ರಾಷ್ಟ್ರ ನಿರ್ಮಾಣಕ್ಕೆ ಉತ್ತಮ ನಾಗರೀಕರನ್ನು ಸೃಷ್ಟಿಸುವುದು.
- ಬಳಕೆದಾರರಿಗೆ ಸರಿಯಾದ ಮಾಹಿತಿಯನ್ನು ನೀಡುವುದು.
- ವಿದ್ಯಾರ್ಥಿಗಳಿಗೆ ಮೌಲ್ಯವರ್ಧಕ ಸೇವೆಗಳನ್ನು ಒದಗಿಸುವುದು.
- ವಿದ್ಯಾರ್ಥಿಗಳನ್ನು ಮತ್ತು ಸಿಬ್ಬಂದಿಗಳನ್ನು ಸಂಶೋಧನೆ ಮತ್ತು ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ವಿಭಿನ್ನ ಆಲೋಚನೆಗೆ ಅನುವು ಮಾಡುವುದು.
ಮಿಷನ್:
ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯದ ಗ್ರಂಥಾಲಯವು ಶಿಕ್ಷಣ ಮತ್ತು ಸಂಶೋಧನೆ, ಮಾಹಿತಿ ನಿರ್ವಹಣೆ ಮತ್ತು ವಿತರಿಸುವಿಕೆಗಳಲ್ಲಿ ಶ್ರೇಷ್ಠತೆ ಮತ್ತು ನಾವೀನ್ಯತೆಯನ್ನು ಬೆಂಬಲಿಸುವುದರ ಮೂಲಕ ಬೌದ್ಧಿಕ ಬೆಳವಣಿಗೆಯನ್ನು ಪ್ರೋತ್ಸಾಹಿಸುತ್ತದೆ.
ಉದ್ದೇಶಗಳು:
- ಓದುವ ಹವ್ಯಾಸಗಳನ್ನು ಉತ್ತೇಜಿಸುವುದು.
- ಓದುಗನಿಗೆ ವಿಶೇಷ ಗೌರವ, ಓದುಗನ ವಾಚನದ ಅಗತ್ಯಗಳನ್ನು ಪೂರೈಸುವುದು
- ಪ್ರತಿ ಓದುಗರಿಗೆ ಪುಸ್ತಕ ಮತ್ತು ಮಾಹಿತಿಯನ್ನು ಒದಗಿಸುವುದು
- ಗ್ರಂಥಾಲಯಕ್ಕೆ ಭೇಟಿ ನೀಡುವ ವ್ಯಕ್ತಿ ಯಾರೇ ಆಗಲಿ, ಆತ ಅಮೂಲ್ಯ, ಅನನ್ಯ ವ್ಯಕ್ತಿ ಎಂದು ಭಾವಿಸಿ, ಆತನ ಅಮೂಲ್ಯವಾದ ಸಮಯ ಪೋಲಾಗದಂತೆ ಕ್ರಮವಹಿಸುವುದು.
- ಗ್ರಂಥಾಲಯವು ಒಂದು ಬೆಳೆಯುತ್ತಿರುವ ಸಂಸ್ಥೆಯಾಗಿದ್ದು, ಅದನ್ನು ಅಭಿವೃದ್ಧಿಯ ಪೂರಕಗೊಳಿಸುವುದು.
- ಗ್ರಂಥಾಲಯವನ್ನು ಗಣಕೀಕರಿಸುವುದು.