ಗ್ರಂಥಾಲಯದ ನಿಯಮಾವಳಿಗಳು
- ವಿದ್ಯಾರ್ಥಿಗಳು ಪುಸ್ತಕ ಪಡೆಯಲು ಗ್ರಂಥಾಲಯದ ಸದಸ್ಯತ್ವಕ್ಕಾಗಿ ಅರ್ಜಿ ಸಲ್ಲಿಸಿ, ಕಡ್ಡಾಯವಾಗಿ ಸದಸ್ಯತ್ವ ಪಡೆದಿರಬೇಕು.
- ಸದಸ್ಯರು ಗ್ರಂಥಾಲಯಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ತಮ್ಮ ಸದಸ್ಯತ್ವ ದಾಖಲಾತಿಗಳನ್ನು ಕಡ್ಡಾಯವಾಗಿ ತಂದಿರಬೇಕು.
- ವಿದ್ಯಾರ್ಥಿಗಳು 8 ದಿನಗಳ ಅವಧಿಗೆ ಐದು ಪುಸ್ತಕಗಳನ್ನು ಎರವಲು ಪಡೆಯಲು ಅವಕಾಶವಿರುತ್ತದೆ.
- ಪುಸ್ತಕವನ್ನು ಹಿಂದಿರುಗಿಸುವ ಕೊನೆಯ ದಿನಾಂಕವನ್ನು ಮೀರಿದರೆ, ಒಂದು ದಿನಕ್ಕೆ 1=00 ರೂ ಗಳಂತೆ ದಂಡ ವಿಧಿಸಲಾಗುವುದು.
- ಎಲ್ಲಾ ಓದುಗರು ಕಡ್ಡಾಯವಾಗಿ ತಮ್ಮ ಸಹಿಯನ್ನು ಸೆಕ್ಯೂರಿಟಿ ಡೆಸ್ಕ್‌ನಲ್ಲಿ ಇರಿಸಲಾದ ಹಾಜರಾತಿ ಪುಸ್ತಕದಲ್ಲಿ ಮಾಡಬೇಕು.
- ಸದಸ್ಯರು ಗ್ರಂಥಾಲಯದ ಪುಸ್ತಕಗಳನ್ನು ಇರಿಸಲಾದ ಸ್ಥಳಕ್ಕೆ ಭೇಟಿ ನೀಡುವಾಗ ತಮ್ಮ ಕೈಚೀಲ ಹಾಗೂ ಇತರೆ ವಸ್ತುಗಳನ್ನು ಕಡ್ಡಾಯವಾಗಿ ಗ್ರಂಥಾಲಯದ ಭದ್ರತಾ ಕೌಂಟರ್‌ನಲ್ಲಿ ಇಟ್ಟು ಬರಬೇಕು.
- ಸದಸ್ಯರು ಗ್ರಂಥಾಲಯದ ಆವರಣದಲ್ಲಿ ತಮ್ಮ ಸ್ವಂತ ಪುಸ್ತಕಗಳನ್ನು, ಜರ್ನ್‌ಲ್ಸ್ ಹಾಗೂ ಇತರೆ ಎಲೆಕ್ಟ್ರಾನಿಕ್ ಯಂತ್ರೋಪಕರಣಗಳನ್ನು ತರುವುದನ್ನು ನಿಷೇಧಿಸಲಾಗಿದೆ.
- ಓದುಗರು ಮಾತನಾಡುವಾಗ ಕಡಿಮೆ ಧ್ವನಿಯಲ್ಲಿ ಮಾತನಾಡಲು ಗ್ರಂಥಾಲಯವು ವಿನಂತಿಸಿಕೊಳ್ಳುತ್ತದೆ..
- ಗ್ರಂಥಾಲಯ ಸದಸ್ಯರು ಗ್ರಂಥಾಲಯದ ಒಳಗೆ ಇರುವಾಗ ಮೊಬೈಲ್ ಅಥವಾ ಇನ್ನಿತರೇ ವಿದ್ಯುನ್ಮಾನ ಯಂತ್ರಗಳನ್ನು ಸ್ವಿಚ್ ಆಫ್ ಮಾಡಿಕೊಳ್ಳಬೇಕು.
- ಓದುಗರು ಪುಸ್ತಕದ ಹಾಳೆಗಳನ್ನು ಜೆರಾಕ್ಸ್ ಮಾಡಿಸಿಕೊಳ್ಳುವಾಗ ಮಡಚಬಾರದು ಎಂದು ಗ್ರಂಥಾಲಯವು ಮನವಿ ಮಾಡಿಕೊಳ್ಳುತ್ತದೆ.
- ಗ್ರಂಥಾಲಯದ ಸದಸ್ಯರು ಗ್ರಂಥಾಲಯದ ನಿಯಮಾವಳಿಗಳನ್ನು ಗ್ರಂಥಾಲಯದ ಪರಿಣಾಮಕಾರಿ ಆಡಳಿತಕ್ಕಾಗಿ ಹಾಗೂ ಉತ್ತಮ ಕಾರ್ಯನಿರ್ವಹಣೆಗಾಗಿ ಪಾಲಿಸತಕ್ಕದ್ದು.
- ಗ್ರಂಥಾಲಯದ ಸದಸ್ಯರು ಗ್ರಂಥಾಲಯದಲ್ಲಿರುವ ಪುಸ್ತಕದ ಹಾಳೆಗಳನ್ನು ಹರಿಯಬಾರದು, ಹಾಗೊಂದು ವೇಳೆ ಆ ಪುಟದ ಮಾಹಿತಿ ಬೇಕಿದ್ದರೆ, ಆ ಪುಟವನ್ನು ಜೆರಾಕ್ಸ್ ಮಾಡಿಸಿಕೊಳ್ಳತಕ್ಕದ್ದು.
- ಗ್ರಂಥಾಲಯದಲ್ಲಿ ಜೋಡಿಸಿಟ್ಟ ದಾಖಲೆ, ಪುಸ್ತಕಗಳನ್ನು, ನಿಗಧಿತ ಸ್ಥಳದಲ್ಲಿಯೇ ಇಡಬೇಕು. ನೋಡಿ ಓದಿ ಅಥವಾ ಜೆರಾಕ್ಸ್ ಮಾಡಿದ ನಂತರ ಮತ್ತೆ ಅದೇ ಜಾಗದಲ್ಲಿ ಸರಿಯಾಗಿ ಜೋಡಿಸಿಡಿ.
- ಗ್ರಂಥಾಲಯದ ಪರಿಸರವನ್ನು ಶುಚಿಯಾಗಿಡಲು ಸಹಕರಿಸಿ.
- ಸದಸ್ಯರು ಪುಸ್ತಕಗಳನ್ನು ಉಪಯೋಗಿಸಿದ ಮೇಲೆ ಡೆಸ್ಕ್ ಮೇಲೆ ಸರಿಯಾಗಿ ಇಟ್ಟು ಹೋಗುವುದು.
- ಗ್ರಂಥಾಲಯದ ಸದಸ್ಯರು ತಮ್ಮ ನೊಂದಣಿಯನ್ನು ತಮ್ಮ ಹಳೆಯ ಪುಸ್ತಕ ತಗೆದುಕೊಳ್ಳುವ ಟಿಕೆಟ್‌ಗಳನ್ನು ವಾಪಸ್ ಕೊಡುವ ಮೂಲಕ ನವೀಕರಿಸಿಕೊಳ್ಳಬೇಕು.
- ಗ್ರಂಥಾಲಯದ ಭದ್ರತಾ ಸಿಬ್ಬಂದಿಗಳು ಕೇಳಿದಾಗ ಸದಸ್ಯರು ತಮ್ಮ ಗುರುತಿನ ಚೀಟಿಯನ್ನು ತೋರಿಸಿ ಸಹಕರಿಸಬೇಕು.
- ಓದುಗರು ತಮಗೆ ಏನಾದರೂ ತೊಂದರೆಗಳಿದ್ದಲ್ಲಿ ಗ್ರಂಥಾಲಯದ ಸಿಬ್ಬಂದಿ ವರ್ಗದವರ ನೆರವನ್ನು ಪಡೆಯಬಹುದು.
- ಓದುಗರ ಸಹಕಾರವನ್ನು ಕೋರಲಾಗಿದೆ.