ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ
ನಾವುಗಳು ಈಗಿರುವುದು ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಯುಗದಲ್ಲಿ, ಅಂದರೆ ಎಲ್ಲೆಡೆಯೂ ಗಣಕಯಂತ್ರವು ಪ್ರತಿಯೊಬ್ಬರಿಗೆ ಉತ್ಪಾದಕ ಮತ್ತು ಮನೋರಂಜನೆಯ ಸಾಧನವಾಗಿದೆ. ಶಿಕ್ಷಕರೆಲ್ಲರೂ ಪ್ರಶಿಕ್ಷಣಾರ್ಥಿಗಳನ್ನು ಕ್ರಿಯಾತ್ಮಕವಾಗಿ ತೊಡಗಿಸಲು ಗಣಕಯಂತ್ರ ಜ್ಞಾನವನ್ನು ಹೆಚ್ಚಾಗಿ ಮತ್ತು ವಿಭಿನ್ನವಾಗಿ ಬಳಸುತ್ತಿರುವರು. ಇದರೊಂದಿಗೆ ಪ್ರಶಿಕ್ಷಣಾರ್ಥಿಗಳು ಆಸಕ್ತಿಯುತವಾಗಿ, ಅಭಿಪ್ರೇರಿತವಾಗಿ ಕಲಿಯುವಂತೆ ಮಾಡಲು ತರಗತಿಯ ಬೋಧನೆಯಲ್ಲಿ ಪವರ್ಪಾಯಿಂಟ್ಗಳನ್ನು ಬಳಸುವುದು, ಬಹು ಇಂದ್ರಿಯ ಮಾಧ್ಯಮಗಳೊಂದಿಗೆ ಗ್ರಾಫಿಕ್ಸ್ಗಳನ್ನು ವಿಡಿಯೋ ಮತ್ತು ಅನಿಮೇಷನ್ಗಳೊಂದಿಗೆ ಅತ್ಯುತ್ತಮ ನೋಡುಗ ಕಲಿಕಾಕಾರರನ್ನು ಸೃಷ್ಟಿಸಲಾಗುತ್ತದೆ.